Showing posts with label SOCIAL. Show all posts
Showing posts with label SOCIAL. Show all posts

ಕೇಂದ್ರ ಬಜೆಟ್ 2020

ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಮತಿ ಧನಲಕ್ಷ್ಮೀ ಅವರಿಂದ ವಿವರಣೆ

SOCIAL ACTIVITY

Social Activity 9th.

ಶಾಲಾ ಸಂಸತ್ ಚುನಾವಣೆ 2019

 ವಿಡಿಯೋ ಕೃಪೆ:ಸಂತೋಷ್ ಬಿ ಎಸ್
                                                                        ಸರ್ಕಾರಿ ಪ್ರೌಢಶಾಲೆ ಧರ್ಮಪುರ ಇಲ್ಲಿ ದಿನಾಂಕ :26 -6 -2019 ರಂದು ನಡೆದ ಶಾಲಾ ಸಂಸತ್ ಚುನಾವಣೆ ವರದಿ ನಮ್ಮ ಶಾಲೆಯಲ್ಲಿ ಎಂದಿನಂತೆ ಪ್ರತಿವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಯನ್ನು ನಾಮಪತ್ರ ಸಲ್ಲಿಸುವ ಮೂಲಕ ಅಭ್ಯರ್ಥಿಗಳು ಬಹಳ ಉತ್ಸಾಹದಿಂದ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಹಾಗೂ ಶಾಲೆಯ ಚುನಾವಣಾ ಸಾಕ್ಷರತಾ ಕ್ಲಬ್ ನ ಸಂಚಾಲಕರಾದ ಶ್ರೀಮತಿ ಧನಲಕ್ಷ್ಮಿ ರವರು ನಾಮಪತ್ರಗಳನ್ನು ಪರಿಶೀಲಿಸಿ ಅವುಗಳ ಅಂತಿಮ ಪಟ್ಟಿಯನ್ನು ದಿನಾಂಕ 21-6-2019 ರಂದು ಪ್ರಕಟಿಸಿದರು.ನಂತರ ಅಭ್ಯರ್ಥಿಗಳಿಗೆ ಮತಪ್ರಚಾರ ಮಾಡಲು ಅವಕಾಶ ಕಲ್ಪಿಸಿಕೊಡಲಾಯಿತು.ದಿನಾಂಕ 22 -6 -2019 ರಂದು ಶನಿವಾರ ಬೆಳಿಗ್ಗೆ9.30 ಗಂಟೆಗೆ ಸರಿಯಾಗಿ ಸಕಲ ಸಿದ್ಧತೆಗಳೊಂದಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಮತದಾನದ ಪ್ರಕ್ರಿಯೆಯಲ್ಲಿ ನಮ್ಮ ಶಾಲೆಯ ಮುಖ್ಯ ಶಿಕ್ಷಕರು ಮುಖ್ಯ ಚುನಾವಣಾ ಅಧಿಕಾರಿಯಾಗಿ, ಶ್ರೀಮತಿ ಕೀರ್ತಿ ಶ್ರೀಮತಿ ಸುಮಾ ಶ್ರೀಮತಿ ಪುಷ್ಪಲತಾರವರು  ಕ್ರಮವಾಗಿ ಒಂದನೇ ಎರಡನೇ ಮೂರನೇ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರೆ, ಶ್ರೀಯುತ ಅನಂತಮೂರ್ತಿ ಅವರು ಸೂಕ್ಷ್ಮ ಪರಿವೀಕ್ಷಕ ರಾಗಿ ಮೈಕ್ರೋ ಅಬ್ಸರ್ವರ್ ಆಗಿ ಹಾಗೂ ಶ್ರೀಯುತ ಸಂತೋಷ್ ರವರು ಟಿವಿ ಚಾನಲ್ ವರದಿಗಾರರಾಗಿ, ಶ್ರೀಯುತ ಕೃಷ್ಣಾಚಾರ್ಯರು ಪತ್ರಿಕಾ ವರದಿಗಾರರಾಗಿ, ಶ್ರೀಯುತ ಪ್ರವೀಣ್ ರವರು ಮತ ಎಣಿಕೆ ಮೇಲ್ವಿಚಾರಕರಾಗಿ ಶಾಲೆಯ ಎಲ್ಲಾ ಶಿಕ್ಷಕರು ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡನ್ನು ತೋರಿಸಿ ಮತಪತ್ರಗಳನ್ನು ಪಡೆದು ತಮ್ಮ ಅಮೂಲ್ಯ ಮತವನ್ನು ಚಲಾಯಿಸುವ ಮೂಲಕ ನೈಜ ಚುನಾವಣೆ ರೀತಿಯಲ್ಲಿ ಯಶಸ್ವಿಯಾಗಿ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ನಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗೆ ಯಶಸ್ವಿಯಾಗಿ ಪೂರ್ಣಗೊಂಡ ಶಾಲಾ ಸಂಸತ್ ಚುನಾವಣೆಯಲ್ಲಿ ಕುಮಾರಿ ಅಕ್ಷಿತ  ಅತಿ ಹೆಚ್ಚು ಬಹುಮತವನ್ನು ಗಳಿಸಿ ಮೊದಲನೇ ಸ್ಥಾನವನ್ನು ನಿಶಾಂತ್ ಎರಡನೇ ಸ್ಥಾನವನ್ನು ಪಡೆದರು. ಮುಂದಿನ ಪ್ರಕ್ರಿಯೆಗಳಾದ ಮಂತ್ರಿ ಮಂಡಲ ರಚನೆ ಮತ್ತು ಪ್ರಮಾಣ ವಚನ ಬೋಧನೆಯನ್ನು ಮುಂದಿನ ದಿನಗಳಲ್ಲಿ ನಡೆಸಲು ತೀರ್ಮಾನಿಸಲಾಯಿತು.