Showing posts with label 8TH. Show all posts
Showing posts with label 8TH. Show all posts

Science activity on sound

Sound produced due to vibrating body

ಹೊಸ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

 
                                    
                                           ಬೆಳಕು ಕಾರ್ಯಕ್ರಮ ವರದಿ:
                            ಸರ್ಕಾರಿ ಪ್ರೌಢಶಾಲೆ ಧರ್ಮಾಪುರ ಇಲ್ಲಿ ದಿನಾಂಕ 28-6-19ರಂದು ಅಪರಾಹ್ನ ಬೆಳಕು ಕಾರ್ಯಕ್ರಮವನ್ನು ಆಯೋಜಿಸಲಾಯಿತು. 8ನೇ ತರಗತಿ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳಿಂದ ಸ್ವಾಗತ ಕಾರ್ಯಕ್ರಮವನ್ನು ಬೆಳಕು ಎಂಬ ಕಾರ್ಯಕ್ರಮದ ಅಡಿಯಲ್ಲಿ ಆದರದಿಂದ ವಿನೂತನ ರೀತಿಯಲ್ಲಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸೌಜನ್ಯ ರವರು ನಡೆಸಿಕೊಟ್ಟರು. ಕಾರ್ಯಕ್ರಮವು 9ನೇ ತರಗತಿ ವಿದ್ಯಾರ್ಥಿಗಳಾದ ಹೇಮಲತಾ ಮತ್ತು ತಂಡದವರಿಂದ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.ನಂತರ ಕುಮಾರಿ ಲಾವಣ್ಯ ರವರು ಎಲ್ಲರನ್ನು ಕಾರ್ಯಕ್ರಮಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸಿದರು. ನಂತರದಲ್ಲಿ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕರು ದೀಪಬೆಳಗಿಸಿ, ದೀಪವನ್ನು ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ದೀಪದಿಂದ ದೀಪವ ಹಚ್ಚಬೇಕು. ಮಾನವ ಗೀತೆಯೊಂದಿಗೆ ಕಾರ್ಯಕ್ರಮವನ್ನು ವಿನೂತನ ರೀತಿಯಲ್ಲಿ ಪ್ರಾರಂಭಿಸಲಾಯಿತು. ನಂತರ 8ನೇ ತರಗತಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳು ಕವನ ವಾಚನ, ಚಲನಚಿತ್ರ ಗೀತೆ, ನೃತ್ಯ, ಭಕ್ತಿಗೀತೆ, ಜನಪದ ಗೀತೆ ಮುಂತಾದ ಕಾರ್ಯಕ್ರಮವನ್ನು ನೀಡಿ ಎಲ್ಲರನ್ನೂ ರಂಜಿಸಿದರು. ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ತರಗತಿ ಶಿಕ್ಷಕರಾದ ಶ್ರೀಮತಿ ಪುಷ್ಪಲತಾ ಮೇಡಂ ಮಾತನಾಡಿದರು. ಅಂತಿಮವಾಗಿ ಮುಖ್ಯಶಿಕ್ಷಕರು ಎಲ್ಲ ಮಕ್ಕಳನ್ನು ಕುರಿತು ಹಿತವಚನಗಳನ್ನು ಹೇಳಿದರು. ಕಾರ್ಯಕ್ರಮವು ವಂದನಾರ್ಪಣೆಯೊಂದಿಗೆ ಪೂರ್ಣಗೊಂಡು, ಸಿಹಿ ವಿತರಣೆಯನ್ನು ಮಾಡಲಾಯಿತು.