World yoga day celeberation

  
 Video by Santhosh B S
                                                           ಸರ್ಕಾರಿ ಪ್ರೌಢಶಾಲೆ ಧರ್ಮಾಪುರ ಇಲ್ಲಿ ದಿನಾಂಕ 21- 6- 2019 ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು ಬೆಳಿಗ್ಗೆ 8:30 ಯೋಗ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು . ವಿದ್ಯಾರ್ಥಿಗಳು ಪೂರ್ವ ಯೋಜಿತ ಸಿದ್ಧತೆಗಳೊಂದಿಗೆ ಆವರಣದಲ್ಲಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಶ್ರೀಯುತ ಅನಂತಮೂರ್ತಿಯವರ ಮಾರ್ಗದರ್ಶನದಲ್ಲಿ ಯೋಗದ  ಮಹತ್ವವನ್ನು ತಿಳಿಸಿ ಯೋಗಾಭ್ಯಾಸ ಮಾಡುವುದರ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು ವಿದ್ಯಾರ್ಥಿಗಳು ವಿವಿಧ ಆಸನಗಳನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಕಮಲಮ್ಮ ರವರು ವಹಿಸಿ ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು  ವಿದ್ಯಾರ್ಥಿನಿಯಾದ ಕುಮಾರಿ ಲಾವಣ್ಯ ಯೋಗದ ದಿನದಮಹತ್ವದ ಬಗ್ಗೆ ಮಾತನಾಡಿದರು ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು ಉತ್ತಮ ಯೋಗಪ್ರದರ್ಶನದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.